ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ಹೇಳಿದ ಸತ್ಯ | Filmibeat Kannada

2018-01-19 12

ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಹಾಗೂ ನಟ ಕಾಶಿನಾಥ್ ಅವರ ಪಾರ್ಥೀವ ಶರೀರ ಪಂಚಭೂತಗಳಲ್ಲಿ ಲೀನವಾಗಿದೆ. ಕುಟುಂಬದ ಸದಸ್ಯರು ಹಾಗೂ ಚಿತ್ರರಂಗವನ್ನ ಅಗಲಿರುವ 'ಅಪರೂಪದ ಅತಿಥಿ'ಯ ಜೀವನ ವಿಶೇಷವಾಗಿತ್ತು.

ಅಂದ್ಹಾಗೆ, ಕಾಶಿನಾಥ್ ಅವರು ಎಲ್ಲಿಯೂ ತಮ್ಮ ವಯಸ್ಸನ್ನ ಹೇಳುತ್ತಿರಲಿಲ್ಲ, ಮತ್ತು ಅವರ ಹುಟ್ಟುಹಬ್ಬದ ದಿನಾಂಕವೂ ಯಾರಿಗೂ ಗೊತ್ತಿರಲಿಲ್ಲ. ಇದನ್ನ ಗೌಪ್ಯವಾಗಿಯೇ ಇಟ್ಟಿದ್ದರು. ಅವರ ನಿಧನದ ನಂತರ ಅವರ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಿದೆ. 65, 66, 67 ವಯಸ್ಸು ಎಂದು ಹೇಳುತ್ತಿದ್ದಾರೆ. ಆದ್ರೆ, ಯಾವುದೇ ದಾಖಲೆಗಳಿರಲಿಲ್ಲ.

ಇದೀಗ, ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ವೈರಲ್ ಆಗಿದ್ದು, ಇದರಲ್ಲಿ ಕಾಶಿನಾಥ್ ಅವರ ಜನ್ಮದಿನಾಂಕ ಮತ್ತು ವಯಸ್ಸಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದೆ.ಕಾಶಿನಾಥ್ ಅವರ ನಿಧನದ ನಂತರ ಅವರ ಡ್ರೈವಿಂಗ್ ಲೈಸೆನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
Kannada well known Director and actor Kashinatha is no more . But he always kept his age and DOB a big secret . After his death his driving license has become viral and his age is no more a secret

Videos similaires